ಉಪೇಂದ್ರ ರಮ್ಯಾ ಮತ್ತು ಎಸ್ ವಿ ರಾಜೇಂದ್ರ ಸಿಂಗ್ ಬಾಬು ಸಿನಿಪ್ರೇಕ್ಷಕರಿಗೆ ಮಾಡಿದ ಮೋಸ ಏನು...?

ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕರಲ್ಲಿ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಕೂಡ ಒಬ್ಬರು. ಹಿಟ್ ಚಿತ್ರಗಳನ್ನೂ ಗ್ರೇಟ್ ಚಿತ್ರಗಳನ್ನೂ ಕೊಟ್ಟ ಕೀರ್ತಿ ಅವರದಿದೆ. 

ಅವರ ನಿರ್ದೇಶನದ ರಕ್ತ ಕಾಶ್ಮೀರ ಎನ್ನುವ ಸಿನಿಮಾ ಬಿಡುಗಡೆ ಎನ್ನುವ ಸುದ್ದಿ ಬಂದಿದೆ. ಒಂದು ಮೂಲಗಳ ಪ್ರಕಾರ ಈ ಸಿನಿಮಾ 

ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್ 
ಎನ್ನುವ ಹಳೆಯ ಸಿನಿಮಾ ಎನ್ನುವ ಮಾತಿದೆ. ಆದರೆ ನಿರ್ದೇಶಕರು ಅದನ್ನು ಅಲ್ಲಗೆಳೆದಿದ್ದಾರೆ. ಇದು ಬೇರೆಯದೇ ಸಿನಿಮಾ ಎಂದಿದ್ದಾರೆ. ಆದರೆ ಪೋಸ್ಟರ್ ನಲ್ಲಿನ Upendra ಮತ್ತು ರಮ್ಯಾ ಅವರನ್ನು ನೋಡಿದರೆ ಸಧ್ಯದ ಸಿನಿಮಾ ಅಲ್ಲ ಎನ್ನುವುದು ಗೊತ್ತಾಗುತ್ತದೆ. 

ಈ ಹಿಂದೆ ನಿರ್ದೇಶಕರು “ಹಿಂದು ” ಎನ್ನುವ ಬಹುಕೋಟಿ ವೆಚ್ಚದ ಸಿನಿಮಾ ಬಗೆಗೆ ಮಾತಾಡಿದ್ದರು.  ಅದರಲ್ಲಿ upendra ಮುಖ್ಯ ಭೂಮಿಕೆಯಲ್ಲಿರುತ್ತಾರೆ ಎಂದೂ ಅದು ಬಹುಭಾಷೆಯಲ್ಲಿ ಬರುತ್ತದೆ ಎಂದೂ ಪತ್ರಿಕೆಗಳಲ್ಲಿ ಪ್ರಚಾರವಾಗಿತ್ತು. 
ಅದು ಚಿತ್ರೀಕರಣವಾಯಿತಾ? 

ಹಾಗೆಯೇ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಅವರ ಭಾರತ್ 2000 ಎನ್ನುವ ಸಿನಿಮಾ ಕೂಡ ಸಂಪೂರ್ಣವಾಗಿದ್ದು ಕರ್ನಾಟಕದಲ್ಲಿ ಡಬ್ಬಿಂಗ್ ನಿಷೇಧವಿದ್ದ ಸಮಯದಲ್ಲಿ ಡಬ್ಬಿಂಗ್ ಮಾಡಿದ್ದಾರೆ ಎಂದೆಲ್ಲಾ ಸುದ್ದಿಯಾಗಿತ್ತು.  ಮತ್ತೆ ಆ ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಯಿತಾ ? . ತೆಲುಗು ಭಾಷೆಯಲ್ಲಿ ತಯಾರಾಗಿದ್ದ ಭಾರತ್ 2000 ಬಿಡುಗಡೆಯಾಯಿತಾ?  ಗೊತ್ತಿಲ್ಲ. 

ಆದರೆ ಆ ಚಿತ್ರದ ಕನ್ನಡದ ಹಾಡುಗಳು ಇಂದಿಗೂ ಯೂ ಟ್ಯೂಬ್ ನಲ್ಲಿವೆ. 
ಕೆಲವು ಸಿನಿಮಾಗಳಿಗೆ ಸ್ಟಾರ್ ಇದ್ದರೂ , ನಿರ್ದೇಶಕರು ಹಿರಿಯರು ಸಾಧಕರಾಗಿದ್ದರೂ ಕಾಲ ಕೂಡಿ ಬರುವುದಿಲ್ಲ.

Comments