ಧರ್ಮ ಕೀರ್ತಿರಜ್, ಈ ಬಾರಿಯ ಕನ್ನಡ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ತನ್ನ ಮುಗ್ಧತನ ಹಾಗೂ ಒಳ್ಳೆಯ ಮನಸ್ಸಿನಿಂದ ಕರುನಾಡ ಮನಸ್ಸು ಗೆದ್ದ ಕಾಡ್ಬಾರೀಸ್ ಎನ್ನಬಹುದು. ನವಗ್ರಹ ಎಂಬ ಸೂಪರ್ ಹಿಟ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಖ್ಯಾತ ಖಳನಟ ಕೀರ್ತಿರಾಜ್ ರವರ ಏಕೈಕ ಪುತ್ರ ಧರ್ಮ ಮುಂದೆ ಕ್ಯಾಡ್ಬಾರೀಸ್ ಅಂತಲೇ ಖ್ಯಾತ ಪಡೆದು ಚಿತ್ರರಂಗದ ಭರವಸೆ ನಾಯಕ ನಟ ಎನಿಸಿಕೊಂಡರು..
ಆದರೆ ಸಾಲುಸಾಲು ಸಿನಿಮಾಗಳು ಮಾಡಿದರು ಕೂಡ ಧರ್ಮ ಕೀರ್ತಿರಾಜ್ ರವರಿಗೆ ಸ್ಟಾರ್ ಪಟ್ಟ ಸಿಗಲೇ ಇಲ್ಲ.. ನವಗ್ರಹ ಸಿನಿಮಾ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದರು ಕೂಡ ಯಾವ ಸಿನಿಮಾ ಕೂಡ ಹೇಳಿಕೊಳ್ಳುವ ಯಶಸ್ಸು ತಂದುಕೊಡಲಿಲ್ಲ. ಇನ್ನೇನು ಚಿತ್ರರಂಗದಿಂದ ಮರೆಯಾಗುತ್ತಿದ್ದಾರೆ ಎನ್ನುವಷ್ಟರಲ್ಲೇ ಬಿಗ್ ಬಾಸ್ ಎಂಬ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಗೆ ಆಗಮಿಸಿ ಅದೃಷ್ಟ ಪರೀಕ್ಷೆಗೆ ಮುಂದಾದರು..
ಹೌದು ಬಿಗ್ ಬಾಸ್ ಗೆ ಧರ್ಮ ಹೆಸರು ಕೇಳಿಬರುತ್ತಿದ್ದಂತೆ ಕಪ್ ಗೆಲ್ಲುವ ಸ್ಪರ್ದಿಗಳ ಪಟ್ಟಿಯಲ್ಲಿ ಧರ್ಮ ಅವರ ಹೆಸರು ಕೂಡ ಕೇಳಿಬಂದಿತ್ತು. ಹೌದು ನಟ ಧರ್ಮರವರು ಈ ಶೋಗೆ ಬಂದಿರುವ ಸ್ಪರ್ಧಿಗಳಿಗೆ ಪೈಪೋಟಿ ಕೊಡಬಹುದು ಎಂಬ ಮಾತು ಕೂಡ ಹರಿದಾಡಿತ್ತು . ಆದರೆ ಮನೆಯೊಳಗೆ ಮುಗ್ಧರಾಗಿದ್ದ ಅವರು ಕೇವಲ 55 ದಿನಗಳ ಒಳಗೆ ದೊಡ್ಡ ಮನೆಯಿಂದ ಹೊರ ಬಂದಿದ್ದಾರೆ. ಸದ್ಯ ಬಿಗ್ಬಾಸ್ನಿಂದ ಕಲ್ಕಿತ್ತು ಬರುತ್ತಿದ್ದಂತೆ ಇದೀಗ ಬ್ಯಾಕ್ ಟು ಬ್ಯಾಕ್ ಸಂದರ್ಶನಗಳನ್ನು ನೀಡುತ್ತಿದ್ದಾರೆ.
ಇನ್ನು ಬಿಗ್ ಬಾಸ್ ಮನೆಯಲ್ಲಿ ನಟಿ ಅನುಷಾ ರೈ ಹಾಗೂ ಐಶ್ವಯ ಸಿಂಧೂಗಿ ಅವರ ಜೊತೆ ಧರ್ಮ ರವರ ಹೆಸರು ಜೋರಾಗಿ ಕೇಳಿಬಂದಿದ್ದರೂ ಕೂಡ ಧರ್ಮ ಹಾಗೂ ಅನುಷಾ ಜೋಡಿ ಜನರಿಗೆ ಮೋಡಿ ಮಾಡಿತ್ತು ಎನ್ನಬಹುದು. ಸದ್ಯ ಇದೀಗ ಸಂದರ್ಶನವೊಂದರಲ್ಲಿ ಅನುಷಾ ಜೊತೆಗಿನ ಪ್ರೀತಿಯ ಜೊತೆಗೆ ಮದುವೆ ವಿಚಾರವನ್ನೂ ಕೂಡ ನಟ ಧರ್ಮ ಪ್ರಸ್ತಾಪ ಮಾಡಿದ್ದಾರೆ. ಹೌದು ಇದೀಗ ನಟ ಧರ್ಮ ರವರಿಗೆ ಪ್ರತಿ ಸಂದರ್ಶನದಲ್ಲಿಯೂ ಕೂಡ ಮದುವೆ ಬಗ್ಗೆನೇ ಪ್ರಶ್ನೆಗಳು ಎದುರಾಗುತ್ತಿವೆ. ಈ ಸಂದರ್ಭದಲ್ಲಿ ಅವರು ತಮಗೆ ಈ ಹಿಂದೆಯೇ ಮದುವೆ ಫಿಕ್ಸ್ ಆಗಿತ್ತು ಎಂಬ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ..
ಈ ಹಿಂದೇನೆ ನನಗೆ ಆಗಬೇಕಿತ್ತು ಎಂದು ಹೇಳಿಕೊಂಡಿರುವ ಧರ್ಮ ಎರಡು ಮೂರು ವರ್ಷಗಳ ಹಿಂದೇಯೇ ನನಗೆ ವಿವಾಹ ನಡೆಯಬೇಕಿತ್ತು. ಅದಕ್ಕೆ ಬೇಕಾಗಿದ್ದಂತಹ ಎಲ್ಲಾ ಸಿದ್ಧತೆಗಳು ಕೂಡ ನಡೆದಿದ್ದವು. ಆದರೆ ಮದುವೆ ತುಂಬಾನೇ ಹತ್ತಿರ ಬಂದು ಕೆಲವು ಕಾರಣಗಳಿಂದಾಗಿ ಕೊನೆ ಕ್ಷಣದಲ್ಲಿ ಮದುವೆ ನಡೆಯಲಿಲ್ಲ ಎಂದು ಧರ್ಮ ಕೀರ್ತಿರಾಜ್ ಜೀ ಕನ್ನಡ ನ್ಯೂಸ್ಗೆ ನೀಡಿದ ಸಂದರ್ಶನದ ವೇಳೆ ಮನಬಿಚ್ಚಿ
ಹೇಳಿಕೊಂಡಿದ್ದಾರೆ.
ಇದರ ಜೊತೆಗೆ ಅನುಷಾ ರೈ ಜೊತೆಗಿನ ಪ್ರೇಮ ಸಲ್ಲಾಪ ದ ಬಗ್ಗೆ ಕೂಡ ರಿವೀಲ್ ಮಾಡಿದ್ದು ಅವರೊಂದಿಗೆ ಹೆಚ್ಚು ಸಿನಿಮಾ ಮಾಡಿದ್ದರಿಂದ ಗೆಳೆತನ ಬೆಳೆದಿದೆ ಎಂದಿರುವ ಧರ್ಮ ಪ್ರೀತಿ - ಪ್ರೇಮ ಅಂತ ಯಾವುದೇ ರೀತಿ ಇಲ್ಲ. ಎಲ್ಲರೂ ಮದುವೆ ಆಗಬೇಕಿದ್ದು ನಮಗಾಗಿ ಒಂದು ಹೆಗಲು ಅಂತ ಬೇಕು. ಮುಂದೆ ಮದುವೆ ಆಗುತ್ತೇನೆ. ಸದ್ಯಕ್ಕೆ ಮದುವೆ ಆಗುವ ಯಾವುದೇ ರೀತಿಯ ಪ್ಲ್ಯಾನ್ ಇಲ್ಲ. ಸಿನಿಮಾಗಳ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
Loo Ning eno gotu avar bagge adun heloo ivanige views bake adke nataka adtinw
ReplyDelete